•April 21, 2007 •
1 Comment

ಕಾದಿರುವುದೀ ಮನ ನಿನ್ನ ಬರುವಿಕೆಗಾಗಿ
ಕಾಯುತಿದೆ ಈ ಹೃದಯ ನಿನ್ನೊಲುಮೆಗಾಗಿ..
ನಿನ್ನ ಕಲ್ಪನೆಯದೊಂದು ಚಿತ್ರವನು ಹೃದಯದಿ ಹೊಂದಿರುವೆನು
ನಿನ್ನಂದವನು ನಾ ಕಂಡಿಲ್ಲ, ನಿನ್ನಯ ಚೆಲುವನ್ನು ಸೃಷ್ಟಿಕರ್ತನೇಬಲ್ಲನು…
ನನ್ನ ಕಲ್ಪನೆಯ ಬೆಡಗಿ ನೀ ಹೀಗಿರುವೆಯೆಂದು
ಚಿತ್ರಿಸಿರುವೆ ನಿನ್ನದೇ ರೂಪವನೊಂದು…
ಮುದ್ದಾದ ಸವಿಮಾತು ನನ್ನ ಕಿವಿಗೆ ಸಾಕು
ಮನಬಿಚ್ಚಿ ಮಾತಾಡೆ ಬೇರೇನು ಬೇಕು…
ಒಮ್ಮೊಮ್ಮೆ ಮೌನದಲಿ ಮಾತಾಡೆ
ಮತ್ತೊಮ್ಮೆ ಮಾತಿನಲಿ ಮೌನವ ಕಾಣೆ…
ಸೂರ್ಯ ರಶ್ಮಿಯ ತೇಜ ನಿನ್ನ ಕಣ್ಣು
ಮನದ ಮಾತನು ಅರಿವ ಮುಗ್ದ ಮನಸಿನ ಹೆಣ್ಣು…
ಉದ್ದವಾದ ದಟ್ಟ ಕಪ್ಪು ಕೂದಲು ನೀ ಹೊಂದಿರೆ
ಮುಖದ ಮೇಲಿನ ಮುಂಗುರುಳು ಮೋಡಿಯ ಮಾಡಿರೆ…
ನೀನಿರಬೇಕು ಎನ್ನಬಾಳಿನ ಸಂಗಾತಿಯಾಗಿ
ನಿನ್ನ ನಾ ಕಾಯುವೆ ಜೀವದ ಉಸಿರಾಗಿ…
ತೇಲಿಬಿಡು ನಿನ್ನ ನಗು ಸಮುದ್ರದ ಅಲೆಯಂತೆ
ನಗುನಗುತಾ ಬಾಳಿರೆ ಜೀವನದಿ ನಿಶ್ಚಿಂತೆ…
ಮಲ್ಲಿಗೆಯ ಕಂಪನು ಸೂಸು ನಮ್ಮಯ ಗೂಡಿನೊಳಗೆ
ನಲ್ಮೆಯ ಬಾಳನು ನಡೆಸುವ ಈ ಲೋಕದೊಳಗೆ…
ಮಾತೆ ತೋರುವ ಮಮತೆ ನಿನ್ನೊಳು ಇರಲಿ
ನಿನ್ನ ಹೃದಯದ ತುಂಬಾ ಕರುಣೆ ನೆಲೆಸಿರಲಿ…
ಎಲ್ಲರಲಿ ಬೆರೆನೀನು, ಮಾಡು ಮಾತಿನ ಮೋಡಿ
ನಿನ್ನ ಎಲ್ಲ ಗುಣವನು ಸಂತಸ ಪಡಬೇಕು ನೋಡಿ…
ನಾನಿಲ್ಲಿ ಬಣ್ಣಿಸುವ ಗುಣವೆಲ್ಲಾ ಒಬ್ಬಳಲಿ ಸಿಗುವುದು ಕಷ್ಟ
ಅವಳ ಬಳಿ ಇಲ್ಲದಿರೆ ಈ ಗುಣಗಳು, ಅದ ತುಂಬಲು ನನಗಿಷ್ಟ…
Posted in Uncategorized
•April 20, 2007 •
1 Comment

ಹೃದಯವು ಕಾದಿತ್ತು ನಿನ್ನೊಡನೆ ಮಾತಾಡಲು
ಮಾತುಗಳಿಲ್ಲದ ಮೌನವದು ಕವಿದಿರಲು…
ನಿನ್ನೊಲವಿನಿಂದ ಆ ಹೃದಯದಿ ಸಂತಸವೇ ತುಂಬಿತ್ತು
ನಿನ್ನೊಲುಮೆಯಿಂದಲೇ ಪ್ರೀತಿಯದು ಮೊಳೆದಿತ್ತು…
ನಿನ್ನ ಹೆಸರಕಾಣಲು ಕಾದಿರುವ ಕಣ್ಣುಗಳು
ನಿನಮಾತ ಕೇಳಲು ಕಾದಿರುವ ಕಿವಿಗಳು…
ನಿನ್ನ ನಾ ಕಂಡಿಲ್ಲ ಆದರೂ ಎಂಥಾ ಪ್ರೇಮ, ವಿಚಿತ್ರ !!!
ಎಲ್ಲಿ ನೋಡಿದರಲ್ಲಿ ನಿನ್ನದೇ ಕಲ್ಪನಾ ಚಿತ್ರ…
ಪ್ರೇಮ ಮೊಳೆಯಲು ಬೇಕಿಲ್ಲ ಅಂದ
ಸವಿಮಾತಿನೊಡಗೂಡಿದ ಕಿರುನಗೆಯೇ ಚೆಂದ…
ದೂರದಿಂದ ಬರುತಿದ್ದ ಆ ನಿನ್ನ ಸಂದೇಶ
ಕಾದು ಕುಳಿತಿದ್ದ ನಾನು, ನಿನ್ನ ಪರವಶ…
ಸಂದೇಶವೆಂದರೆ ಮಾತುಗಳ ಸಾಲಲ್ಲ
ಇಬ್ಬರೊಡಗೂಡಿದ ಮೌನ ಸಾಕಲ್ಲ…
ನಿನ್ನ ತುಂಟತನದಿ ನಾ ಕಂಡೆನಾ ಆನಂದ
ಆ ತುಂಟತನದಿ ನಗುತಿರಲು ನೀ ಚೆಂದ…
ದಿನವೂ ಬರುತಿರೆ ನಿಗದಿತ ಸಮಯದಲಿ
ನನ್ನ ನಾ ಮರೆತಿರೆ ಭಾವನೆಗಳ ಸಾಗರದಲಿ…
ನಾ ಹೇಗೆ ಹೇಳಲಿ ನನ್ನೊಳಗಿನ ಕದನ
ನೀ ಏನ ಹೇಳುವೆಯೋ ಕಳವಳದಿ ಈ ಮನ…
ನನ್ನ ಕಳವಳದಲಿ ಕಂಡೆನಾ ನಿಜವನ್ನ
ಬಿರಿಯಿತೆನ್ನ ಈ ಹೃದಯ ಅರಿಯದೇ ನಿನ್ನನ್ನ…
ನಿನ್ನ ಕಾಣಲು ಕಾಯುತಿದ್ದೆ ತವಕದಲಿ
ಬೇಯುತಿದೆ ಈ ಹೃದಯ ನಿನ್ನ ಅಗಲಿಕೆಯಲಿ…
ಎಂಥ ಕಠಿಣನೋಡು ನಮ್ಮಯ ಪ್ರಪಂಚ
ಬಳಿ ಬಂದು ಎನಕೂಡ ಮಾತಾಡೇ ಕೊಂಚ…
ನಾನಾದೆ ಬಿರಿದ ಹೃದಯದ ಹೃದಯವಂತನಂತೆ
ನಿನ್ನೊಲುಮೆ ಎನಗಾಯ್ತು ಗಾಳಿಗೊಡ್ಡಿದ ಹಣತೆ..
Posted in Uncategorized
•April 16, 2007 •
Leave a Comment

ಎಲ್ಲಿಕಂಡೆನೊ ಏನೋ ನಿನದೊಂದು ಚಿತ್ರವಾ
ಅಬ್ಬಾ !!! ಎಂಥಾ ರೂಪರಾಶಿ, ಅದನು ವರ್ಣಿಸಲು ಸಾಧ್ಯವಾ !!!
ಎಲ್ಲಿಯೊಏನೋ ನನ್ನ ಕಣ್ಗೆ ಕಾಣದೆ ನೀ ಇದ್ದೆಯಂದು
ಅಶ್ಚರ್ಯವೋಏನೊ ಸ್ಪೂರ್ತಿಯ ಸೆಲೆಯಾಗಿ ಬಂದಿರುವೆಇಂದು…
ಆ ನಿನ್ನ ಕಣ್ಣುಗಳಲಿ ಹೇಳಲೇನೊ ಕಾತರ
ಆ ನಿನ್ನ ತುಟಿಗಳಲಿ ನಗುವ ಕಾಣೆ ಆದರ…
ದಾಳಿಂಬೆಯ ಹೋಲಿಕೆಯೇ ನಿನ್ನ ದಂತದಾಸಾಲು
ಬಾಯಿತುಂಬಾ ನಗುವಿರಲು ವರ್ಣಿಸಲು ಬಳಿಇಲ್ಲ ಸಾಲು…
ದಟ್ಟವಾದ ಕಪ್ಪುಕೇಶ ನನ್ನ ಮೋಡಿಮಾಡಿದೆ
ನೀಳವಾದ ನಾಸಿಕವು ನಿನ ಮೊಗದ ಅಂದ ಹೆಚ್ಚಿಸಿದೆ…
ನಗುತಿರು ನೀ ಸದಾಕಾಲ ನನಮನದ ಬಯಕೆಯು
ಸುಖಮಯವಾಗಿರಲಿ ಜೀವನ ಇದೆ ನನ್ನ ಹಾರೈಕೆಯು…
Posted in Uncategorized
•April 14, 2007 •
Leave a Comment

ನನ್ನವಳು ಈ ಚಲುವೆ ಬಲು ಅಂದಗಾತಿ
ಸಾಗರದ ಅಲೆಯಂತೆ ನೀ ತೋರುವಾ ಪ್ರೀತಿ…
ಒಮ್ಮೆ ಬಲು ಮೃದುವಾಗಿ ಬಂದೆನ್ನ ಸೋಕಿ
ಮತೊಮ್ಮೆ ರಭಸದಿ ಬಂದೆನ್ನ ತಾಕಿ…
ಕಂಡೆನಾ ಏರಿಳಿತ ನನ್ನವಳ ಪ್ರೀತಿಯಲಿ
ಏನು ಗೊಂದಲವೊ ಏನೊ ಆಕೆಯಾ ಮನಸಿನಲಿ…
ಒಮ್ಮೊಮ್ಮೆ ಸಂತಸದಿ ಬಳಿನನ್ನ ಬರುವಳು
ಮತ್ತೊಮ್ಮೆ ಬೇಸರದಿ ದೊರದಲಿ ಇರುವಳು…
ಚೆಂದುಟಿಯ ಚೆಲುವೆ ಈ ಮೌನ ಬೇಕೇ
ಬಾಯ್ದೆರೆದು ಸವಿನುಡಿಯೆ ಈ ಮೌನ ಸಾಕೇ…
ಮಕ್ಕಳಾಟವು ಚೆನ್ನ ಜಿಂಕೆ ಓಟವು ಚೆನ್ನ
ಓ ನನ್ನ ಚೆಲುವೆ ನೀ ಮಾತಾಡೆ ಬಲುಚೆನ್ನ…
ಮಾತಾಡು ಎನಕೊಡ ಈಗಲಾದರೂ ನಗುತಲಿ
ಕಾದಿಹುದು ಈ ಹೃದಯ ನಿನಗಾಗಿ ತವಕದಲಿ…
Posted in Uncategorized